ಎಲಿ ತಿಂದು ಮುಗಿಯುದ್ರಾಗ
॥ ♫ ॥
ಕೇಳಿ ನೀವೆಲ್ಲಾ ಸದಾ ಎಲಿ ಮೆಲ್ಲುವ ಗುರುವ
ಸದಾನಂದ ಗುರುವಿನ ಲೀಲೆಯನೆಲ್ಲವ
॥ ♫ ॥
ಎಲಿ ತಿಂದು ಮುಗಿಯುದ್ರಾಗ ಮೋಟಾರದಾಗ ಓಡುತಾನ
ಮಟಾ ಮಾಯ ಆಗುತಾನ ಎಲ್ಲರಿಗೂ ಕಾಣತಾನ ॥ಪ॥
॥ ♫ ॥
ನೂರಾರೆಲಿ ಜಗಿತಾನ ನಮ್ಮ ಕರ್ಮ ಉಗುಳುತ್ತಾನ
ರೋಗ-ರುಜಿನ ಕಳೀತಾನ ಸುಖಾ-ಸಂಪತ್ ಕೊಡುತಾನ ॥೧॥
ಆರತಿಗೆ ಬಾ ಅಂತಾನ ಬೇಡಿದ್ದೆಲ್ಲ ಕೊಡುತಾನ
ಭಕ್ತಿ ಮಾಡ ಅಂತಾನ ದರುಶನವ ಕೊಡುತಾನ ॥೨॥
॥ ಎಲಿ ತಿಂದು ॥ ♫ ॥
ಕುದುರಿ ಏರಿ ಹೊಂಟಾನ ಹೊಳಿ ಆಚೆ ಜಿಗಿದಾನ
ಕುದುರಿ ಸ್ವಾಮಿ ಇವನ ಏನ ಭಕ್ತರನ್ನು ಕಾಯುತ್ತಾನ ॥೩॥
ಕಡಾವಿ ಕೈಲಿ ತಿರುವುತ್ತಾನ ಲೀಲಾಮೂರ್ತಿ ಇವನ ಏನ
ನಮ್ಮ ಮುತ್ಯಾ ಇವನ ಏನ ಸದಾನಂದ ಇವನ ಏನ ॥೪॥
॥ ಎಲಿ ತಿಂದು ॥ ♫ ॥
ನುಚ್ಚು ಮೊಸರು ಉಣ್ಣುತ್ತಾನ ಹೋಳಿಗಿ ತುಪ್ಪ ತಿನಿಸುತ್ತಾನ
ನಮ್ಮನ್ನೆಲ್ಲ ಕಾಯುತ್ತಾನ ನಮ್ಮ ಕೂಡ ಇರುತ್ತಾನ ॥೫॥
ನಮ್ಮ ಕೂಡ ಇರುತ್ತಾನ ನಮ್ಮಂತೆ ಇರುತ್ತಾನ
ಹಿಡಿದವನು ನಕ್ಕಾನ ನೋಡ ಬಿಟ್ಟವನು ಅತ್ತಾನ ನೋಡ ॥೬॥
॥ ಎಲಿ ತಿಂದು ॥