Bhoolokake Bhava

ಭೂಲೋಕಕೆ ಭವ

॥ ♫ ॥

ಭೂಲೋಕಕೆ ಭವರೋಗ ವೈದ್ಯನಾಗಿ ದತ್ತ ಧರೆಗೆ ಬಂದ
ಸದಾನಂದ ಗುರು ಚರಿತೆಯ ಕೇಳಲು ಭಕ್ತರಿಗಾನಂದ ॥ಪ॥

॥ ♫ ॥

ಶರಣರ ನಾಡು ಕಲಬುರಗಿಯ ಸುರಪುರ ತಾಲೂಕಿನಲ್ಲಿ
ದೈವ ಭಕ್ತರು ಮಲ್ಲಪ್ಪ ಭೀಮವ್ವ ದಂಪತಿ ಉದರದಲಿ ॥೧॥

ಬಾಲಸೂರ್ಯನು ಮೂಡಿಬಂದನು ಪರಸನಹಳ್ಳಿಯಲಿ
ಸದಾನಂದನೆಂದು ಹೆಸರನ್ನು ಧರಿಸಿ ಲೀಲೆಯ ನಾಡುತಲಿ ॥೨॥

ಕಿಡಿಗೇಡಿಯಂದೆ ಗಿಡಿಸುವ ಆಟ ಕೀಟಲೆ ಊರಿನಲಿ
ಬಾಲ್ಯದಲ್ಲಿಯೇ ಹಾವಿನ ರೂಪ ತೋರಿದ ಜನರಲ್ಲಿ ॥೩॥

ನೀರನೆ ಹಾಕಿ ದೀಪ ಹಚ್ಚಿದನು ಆಶ್ಚರ್ಯ ಊರಿನಲಿ
ಹಸು ನಾಯಿಗಳ ಸ್ನೇಹ ಬೆಳೆಸಿದವಧೂತನು ನೋಟದಲಿ ಅವಧೂತನು ನೋಟದಲಿ ॥೪॥

॥ ♫ ॥

ಹುಡುಗಾಟದಂತೆಯೇ ಹುಡುಗನ ಕಾಟವು ಊರಿಗೆ ಬೇಡಾಯ್ತು
ಮನೆಯ ಮಂದಿಗೂ ಬೇಸರಕಾಡಲಿ ಬಿಡದೇ ಕಣ್ಣಿಸಿತು ॥೫॥

ಹನುಮಂತ ದೇವರಿಗೆ ಬಸವಣ್ಣನಿಗೆ ಕೈಯನ್ನು ಮುಗಿದಾಯ್ತು
ಊರನು ಬಿಟ್ಟುಕಾಡಿಗೆ ಸೇರಿದ ಗುರುವಿನ ಹೆಸರಾಯ್ತು ॥೬॥

ಸುರಪುರ ಬೆಟ್ಟದ ವೃಕ್ಷದ ಮೇಲೆ ವಾಸದ ತಾಣಾಯ್ತು
ಗಿರಿಗವಿಗಳನು ಸುತ್ತುತ ಅಲೆದನು ಅರಿವೆ ಇಲ್ಲದಾಯ್ತು ॥೭॥

ಸಿಂಧನೂರು ಬಗಳಾಂಬಿಕೆ ಗುಡಿಯಲಿ ಭಕ್ತರಿಗ ಹರೆಸಾಯ್ತು
ದಿಕ್ಕು ದಿಗಂಬರ ತಾನೇ ತಾನು ಶಕ್ತಿಯು ಬಲವಾಯ್ತು ॥೮॥

॥ ♫ ॥

ನುಡಿದ ಮಾತು ಅದು ನಡೆಯುತಲಿತ್ತು ಜನರಿಗೆ ಖುಷಿಯಾಯ್ತು
ಸಾಲಿಗ್ರಾಮ ಲಿಂಗ ವಿಭೂತಿ ಸೃಷ್ಟಿಸಿ ಕಷ್ಟವ ಕಳೆದಾಯ್ತು ॥೯॥

ಭವದ ಪಾಪ ಭವ ರೋಗಿಗಳಿಗೆ ಸ್ವಾಮಿಯ ಕೃಪೆಯಾಯ್ತು
ವಿಷ್ಣು ಬ್ರಹ್ಮ ಮಹೇಶ್ವರ ರೂಪ ತೋರುತ ಮೆರೆದಾಯ್ತು ॥೧೦॥

ಬಡವರ ಬಂಧು ಕರುಣಾ ಸಿಂಧು ತೆಲಗಿ ಗ್ರಾಮ ಕಂಡ
ಶರಣೆ ಮುಖಮ್ಮಳ ಭಾವಕೆ ಮೆಚ್ಚಿ ಭಕ್ತಿ ಸವಿಯನುಂಡಾ ॥೧೧॥

ಸರ್ಪರೂಪದಲಿ ದರುಶನ ಕೊಟ್ಟು ಮನದಲಿ ನೆಲೆಗೊಂಡ
ಕಲ್ಲು ಹಸುವಿನಿವು ಹಾಲನು ಹಿಂಡಿ ದೇವರಾಗಿ ಕಂಡ ॥೧೨॥

॥ ♫ ॥

ತೆಲಗಿಯಲ್ಲಿಯೇ ಆಶ್ರಮ ಸ್ಥಾಪಿಸಿ ಭಕ್ತೋದ್ಧಾರಗೈದ
ಬಸವನ ಬಾಗೇವಾಡಿಯ ಶರಣೆಯ ಭಕ್ತಿಗೆ ತಾ ಒಲಿದ ॥೧೩॥

ಸರ್ವರ ಸಂಶಯ ಗಾಳಿಗೆ ಗುರುವು ದಿಟ್ಟಹೆಜ್ಜೆ ತುಳಿದ
ಗಿರಿಜಮ್ಮನಿಗೆ ತಾಳಿಯ ಕಟ್ಟಿ ತಾಯಿ ಎಂದು ಕರೆದ ॥೧೪॥

ಸತ್ಯ ವಾಕ್ಯಗಳ ಸಿದ್ಧಿಯ ಸುರಿಮಳೆ ಸುರಿಸುತ ತಾ ನಡೆದ
ಇಲಕಲ್ಲ ದೋಟ್ಯಾಳ ತಲಕೆರಿ ಎಲ್ಲಾ ನಾಡು ಸುತ್ತುವರೆದ ॥೧೫॥

ವಿಜಯಪುರದಲು ದತ್ತ ಸದಾನಂದ ಆಶ್ರಮ ಶೋಧಿಸಿದ
ಬೆಂಗಳೂರಲ್ಲಿಯೂ ದತ್ತ ಸದ್ಗುರು ಭಕ್ತರ ಮನಸೆಳೆದ ॥೧೬॥

॥ ♫ ॥

ಮುಂಬೈಯಲ್ಲಿ ಮುನಿಯಪ್ಪರಾಜುವಿಗೆ ದರುಶನ ನೀಡಿದನು
ಭೀಮಾಶಂಕರ ಲಿಂಗ ಸೃಷ್ಟಿಸಿ ಭಕ್ತರ ಸಲುಹಿದನು ॥೧೭॥

ಆಶ್ರಮದಲ್ಲಿ ದತ್ತಾತ್ರೇಯನಾಗಿ ಕಾಣುತಲಿರುವವನು
ಮುಂಬೈ ಮತ್ತು ಕರ್ನಾಟಕದಲಿ ತುಂಬಿ ಬೆಳಗಿದನು ॥೧೮॥

ಸರ್ವವ್ಯಾಪಿ ಶ್ರೀ ಸದಾನಂದರ ಮಹಿಮೆ ಅಪಾರವೂ
ಸದಾ ಕಾಲವೂ ನೆನೆದರೆ ಬೇಡಿದ ವರಗಳ ದೊರೆಯುವವು ॥೧೯॥

ಎಷ್ಟು ಬರೆದರೂ ಗುರುವಿನ ವರ್ಣನೆ ಕಡಿಮೆ ಎನಿಸುವುದು
ಸದಾನಂದರಾ ಹರಿಕೆಯ ಕೆಂಪುಳಿ ಬರೆದು ಹಾಡುವುದು ॥೨೦॥

॥ ಭೂಲೋಕಕೆ ॥