ಬಂದಾನ ಬಂದಾನ
॥ ♫ ॥
ಬಂದಾನ ಬಂದಾನ ಸದಾನಂದ ಬಂದಾನ
ಚಂದದಿಂದ ನೋಡೆನವ್ವ ನಾನು ಪರಮಾರ್ಥಿ ॥ಪ॥
॥ ಬಂದಾನ ॥ ♫ ॥
ಅತ್ರಿ ಮನೆಗೆ ಭಿಕ್ಷಕೆ ಬಂದ ಬಾಲಕನಾದವಾ
ತ್ರಿಮೂರ್ತಿರೂಪ ಅವತಾರ ಧರಿಸಿ ಧರೆಗೆ ಇಳಿದು ಬಂದಾನ
ನರ ರೂಪದಲ್ಲಿ ನಮ್ಮ ಸದಾನಂದ ಬಂದಾನವ್ವ ॥೧॥
॥ ಬಂದಾನ ॥ ♫ ॥
ಬಾಲ ರವಿಯ ಪೋಲ್ವ ಮುಗುಳು ನಗೆಯ ಶ್ರೀ ಸದಾನಂದ
ಭಸ್ಮಾಂಭರಧರ ರುದ್ರಾಕ್ಷಿಧರ ಗಿರಿಜಾವಲ್ಲಭ ಬಂದಾನ ॥೨॥
॥ ಬಂದಾನ ॥ ♫ ॥
ಕಾಲಲಿ ಪಾದುಕ ಕಾಶಾಂಯಾಂಬರ ತೊಟ್ಟು ಬಂದಾನ
ಬ್ರಹ್ಮಾಂಡವನೇ ಜೋಳಿಗೆ ಮಾಡಿ ಕೈಯಲ್ಲಿ ಹಿಡಿದು ಬಂದಾನ
ಅನಂತಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಶ್ರೀ ಸದಾನಂದ ॥೩॥
॥ ಬಂದಾನ ॥ ♫ ॥
ಮನುಜ ಕುಲವ ಉದ್ಧಾರ ಮಾಡಲು ಬಂದಾನ ಶ್ರೀ ಸದಾನಂದ
ಭವ ಬಂಧನವ ಕಳೆದೂ ಮುಕ್ತಿಯ ಮಾರ್ಗವ ತೋರುವ
ಸದಾ ನಿನ್ನ ಚರಣದಲ್ಲಿ ನನ್ನ ಮನಸು ನಿಲ್ಲಿಸಯ್ಯ ॥೪॥
॥ ಬಂದಾನ ॥