Ārati

ಸದಾನಂದ ಮಹಾರಾಜರ ಆರತಿ


॥ ♫ ॥

ದಯಾಘನ ದತ್ತರಾಜ ಮೂರ್ತಿ
ಆರತಿ ಜಯ ಜಯ ತ್ರಯ ಮೂರ್ತಿ ॥ಪ॥

॥ ♫ ॥

ಎರಗಿದಾ ನರರ ಹಣೆಯೊಳಿರುವಾ ದುರಿತವಾ ದಹಿಸುವ ಗುರುದೇವಾ
ಕರುಣೆಯ ಸೆಲೆಯ ಹರಿಸಿ ಮನವಾ ರಮಿಸುವ ಸುಗುಣದ ಸದ್ಭಾವಾ ॥೧॥

॥ ದಯಾಘನ ॥ ♫ ॥

ಭಜಕಜನ ಕಾಮಕಲ್ಪಭೂಜಾ, ಕುಜನಕುಲ ಕಂಗೆಡಿಸುವ ತೇಜ
ನಿಜದ ನೆಲೆಗಿಳಿಸುವ ಗುರುರಾಜಾ ವಿಜಯದ ಮೂರೂತಿ ಯತಿರಾಜಾ ॥೨॥

॥ ದಯಾಘನ ॥ ♫ ॥

ಗಾಣಗಾಪುರ ನಿರ್ಗುಣಪಾದಾ ಕೃಷ್ಣೆಯ ಔದುಂಬರ ಪಾದಾ
ಧ್ಯಾನಿಪೇ ಅಮರಾಪುರ ಪಾದಾ ಕುರವಪುರ ತಾಣದ ಶ್ರೀ ಪಾದಾ ॥೩॥

॥ ದಯಾಘನ ॥ ♫ ॥

ಮಣಿಯುವೇ ಕರುಣಿಸು ಅವಧೂತಾ ಚಿನುಮಯ ಕೈವಲ್ಯ ಸುಖದಾತಾ
ದಣಿಯದೇ ಯೋಗೀಶನ ಚಿತ್ತಾ ತಣಿಯಲಿ ಗುಣಗಾನದಿ ದತ್ತಾ ॥೪॥

॥ ದಯಾಘನ ॥

॥ ♫॥

dayāghana dattarāja mūrti
ārati jaya jaya traya mūrti॥pa॥

॥ ♫॥

eragidā narara haṇeyoḷiruvā duritavā dahisuva gurudēvā
karuṇeya seleya harisi manavā ramisuva suguṇada sadbhāvā॥1॥

॥ dayāghana॥ ♫॥

bhajakajana kāmakalpabhūjā, kujanakula kaṅgeḍisuva tēja
nijada nelegiḷisuva gururājā vijayada mūrūti yatirājā॥2॥

॥ dayāghana॥ ♫॥

gāṇagāpura nirguṇapādā kr̥ṣṇeya audumbara pādā
dhyānipē amarāpura pādā kuravapura tāṇada śrī pādā॥3॥

॥ dayāghana॥ ♫॥

maṇiyuvē karuṇisu avadhūtā chinumaya kaivalya sukhadātā
daṇiyadē yōgīśana chittā taṇiyali guṇagānadi dattā॥4॥

॥ dayāghana॥


ದತ್ತಾವತಾರಿಗಳಾದ ಸದ್ಗುರು ಶ್ರೀ ಸದಾನಂದ ಮಹಾರಾಜರ ಬಳಿಗೆ ಭಕ್ತರು ಬಂದು, ತಾವು ಎದುರಿಸುತ್ತಿರುವ ಬಾಧೆಗಳನ್ನು ತೀರಿಸೆಂದು; ರೋಗ-ರುಜಿನಗಳನ್ನು ನಾಶಮಾಡೆಂದು; ತಮ್ಮ ಇಚ್ಛಿತಾರ್ಥಗಳನ್ನು ಈಡೇರಿಸೆಂದು ಪ್ರಾರ್ಥಿಸಿಕೊಂಡಾಗ, ಸದ್ಗುರುಗಳು ಅವರಿಗೆ “ಭಜನೆಗೆ ಬನ್ನಿರಿ, ಆರತಿಗೆ ಬನ್ನಿರಿ, ಎಲ್ಲಾ ಚಲೋ ಆಗ್ತೈತಿ” ಎಂದು ಪ್ರೀತಿ ಪೂರ್ವಕ ನುಡಿದು, ಭಕ್ತರ ಬಾಧೆಗಳನ್ನು ತೀರಿಸಿ ಸುಖ-ಶಾಂತಿ ನೆಮ್ಮದಿಯನ್ನುಂಟು ಮಾಡುತ್ತಿದ್ದಾರೆ. ಅವರು ಭಾವಪ್ರಿಯರೇ ಹೊರತು ಬಾಹ್ಯಪ್ರಿಯರಲ್ಲ. ಭಕ್ತರ ಭಾವಕ್ಕನುಗುಣವಾಗಿ ಅವರು ಅನುಗ್ರಹಿಸುವ ಘಲಗಳಿರುವುವು. ಭೌತಿಕವಾಗಿ ಈಗ ನಮ್ಮ ಮಧ್ಯದಲ್ಲಿ ಇಲ್ಲದಿದ್ದರೂ, ಅವರು ಸೂಕ್ಷ್ಮರೂಪದಲ್ಲಿದ್ದು ಎಲ್ಲಾ ಕಡೆ ಸಂಚಾರ ಮಾಡುತ್ತಲಿರುವರು; ಭಕ್ತರ ಬೆನ್ನತ್ತಿಯಿದ್ದು ಸದಾ ರಕ್ಷಿಸುತ್ತಲಿರುವರು; ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಲಿರುವರು. ಸದ್ಗುರುಗಳ ಪ್ರತಿಷ್ಠಿತ ವಿಗ್ರಹಮೂರ್ತಿಗಳು ಮತ್ತು ಅವರ ಭಾವ ಚಿತ್ರಪಟಗಳು ಚೈತನ್ಯವಂತವಾಗಿದ್ದು ಭಕ್ತರ ಎಲ್ಲಾ ಕೋರಿಕೆಗಳನ್ನು ತೀರಿಸುವ ಶಕ್ತಿ ಸಾಮಥ್ರ್ಯವುಳ್ಳವುಗಳಾಗಿವೆ.
ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳಲ್ಲಿ ಪುಣ್ಯಕರವಾದ ಕರ್ಮ ಅಥವಾ ಕೆಲಸಗಳನ್ನು ಮಾಡುವುದರಿಂದ ಪುಣ್ಯರೂಪವಾದ ಸ್ಪಂದನೆಗಳು; ಪಾಪ ಕರ್ಮಗಳನ್ನು ಮಾಡುವುದರಿಂದ ಪಾಪರೂಪ ಸ್ಪಂದನೆಗಳುವುಂಟಾಗುತ್ತವೆ. ಪುಣ್ಯ ವಿಶೇಷದಿಂದ ಪುಣ್ಯಪುರುಷರ ಸಮಾಗಮ; ಪುಣ್ಯಸ್ಥಳಗಳ ದರ್ಶನ ಭಾಗ್ಯ; ಪುಣ್ಯಕರ್ಮಗಳನ್ನು ಮಾಡುವ ಆಸಕ್ತಿ ಲಭಿಸುತ್ತದೆ ಮತ್ತು ಅದು ದಿನ ದಿನಕ್ಕೂ ಬೆಳೆಯುತ್ತಾ ಬರುತ್ತದೆ. ಆಗ ನಿಶ್ಚಲತೆಯುಂಟಾಗಲು ಅವಕಾಶವಾಗುತ್ತದೆ ಮತ್ತು ಸದ್ಗುರು ಶ್ರೀ ಸದಾನಂದ ಮಹಾರಾಜರನ್ನು ಭಕ್ತಿ-ಶ್ರದ್ಧಾಭಾವದಿಂದ ಭಜಿಸುವುದರಿಂದ ಎಲ್ಲಾ ಕೋರಿಕೆಗಳು ಸಿದ್ಧಿಸುವುವು.
ತಾಳ, ಮೃದಂಗ ಇತ್ಯಾದಿ ವಾದ್ಯಗಳಿಂದ ಎಲ್ಲರೂ ಒಟ್ಟಾಗಿ ಕೂಡಿ ಸಾಮೂಹಿಕವಾಗಿ ಮಧುರಸ್ವರದಿಂದ ಗಟ್ಟಿಯಾಗಿ ಸದ್ಗುರುಗಳ ಭಾವಪೂರಿತ ಭಜನೆ ಮಾಡುವುದರಿಂದಲೂ, ಸದ್ಗುರುಗಳ ವಿಶೇಷ ಗುಣಗಳಿಂದ ಕೂಡಿದ ಅμÉ್ಟೂೀತ್ತರ ಶತನಾಮಾವಳಿ ಮತ್ತು “ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ'' ಎಂಬ ಬೀಜಮಂತ್ರವನ್ನು ಪಠಣ ಮಾಡುವುದರಿಂದಲೂ ಭಕ್ತರ ಮನಸ್ಸು ಸ್ಥಿರಗೊಳ್ಳುವುದು; ಬುದ್ಧಿಯು ಚಂಚಲಕ್ಕೊಳಗಾಗದು; ಚಿತ್ತವು ಶುದ್ಧವಾಗುವುದು; ಅಹಂಕಾರವು ನಶಿಸುವುದು; ಎಲ್ಲಾ ಮದಗಳು ಕ್ಷೀಣಿಸುವುವು. ಹೀಗೆ ಹೆಚ್ಚು ಹೆಚ್ಚು ತನ್ಮಯತ್ವ ಹೊಂದಿ ಭಜಿಸುತ್ತಾ, ಪಠಿಸುತ್ತಾ ಬಂದಂತೆ ಅಷ್ಟು ಅಷ್ಟು ಮನೋಬುದ್ಧಿ ಚಿತ್ತಾಹಂಕಾರಗಳು ಪರಿಶುದ್ಧವಾಗಿ ಏಕಾಗ್ರತೆ ಲಭಿಸುವುದು. ಕೊನೆಯಲ್ಲಿ ಸದ್ಗುರುಗಳಿಗೆ ಆರತಿಯನ್ನು ಬೆಳಗುತ್ತಾ ಹಾಡಿ, ಪ್ರಾರ್ಥಿಸುವ ಸಮಯದಲ್ಲಿ ಭಕ್ತರ ಸಂಬಂಧಪಟ್ಟ ಬಾಧೆಗಳ, ಕಷ್ಟಗಳ, ಕೋರಿಕೆಗಳ ಸ್ಪಂದನೆಗಳು ಆರತಿಕಿರಣಗಳ ಮೂಲಕ, ಸದ್ಗುರುಗಳಲ್ಲಿನ ಅಮೋಘವಾದ ದಿವ್ಯ ಶಕ್ತಿಯಿಂದ ಮಾರ್ಪಟ್ಟು ಶುಭಪ್ರದವಾದ ಮತ್ತು ದಿವ್ಯಾನುಗ್ರಹಪೂರಿತವಾದ ಆರತಿ ಕಿರಣಗಳ ರೂಪದಲ್ಲಿ ಬಂದು ಆಶ್ರಿತ ಭಕ್ತರ ಚೈತನ್ಯಗಳಲ್ಲಿ ಲೀನವಾಗುತ್ತವೆ. ಈ ಆರತಿ ಕಿರಣಗಳ ಮೂಲಕ ಸದ್ಗುರುಗಳ ಕೃಪೆಯು ದೊರೆಯುತ್ತದೆ ಮತ್ತು ಅನುಗ್ರಹವು ಲಭಿಸಿ ಬೇಡಿದ ಕೋರಿಕೆಗಳು ಈಡೇರುವುವು. ಸದಾಕಾಲ ಅವರ ಅಭಯ ಹಸ್ತವು ಭಕ್ತರನ್ನು ರಕ್ಷಿಸುತ್ತಾ ಇರುತ್ತದೆ. ಸದ್ಗುರುಗಳ ಸ್ಮರಣೆ ಮಾತ್ರದಿಂದ ಅನೇಕ ಜನ್ಮಗಳಿಂದ ಮಾಡಿದ ಪಾಪರಾಶಿಯು ನಾಶವಾಗುವುದು.

Coming soon...

Contact us on the provided email id if you can help write this!

CREDITS: Unknown. Ref #1