Biduvenenayya Datta

ಬಿಡುವೇನೇನಯ್ಯ ದತ್ತ

॥ ♫ ॥

ಬಿಡುವೇನೇನಯ್ಯ ದತ್ತ ಬಿಡುವೇನೇನಯ್ಯ

ನಾವು ಬಿಟ್ಟರೆ ನೀ ಬಿಡದಂತೆ ಕಾಯುವೆ ನಮ್ಮನ್ನೆಲ್ಲ
ಹೇ ದಯಾಘನಾ, ಆನಂದ ನಂದನ ॥ಪ॥

॥ ಬಿಡುವೇನೇನಯ್ಯ ॥ ♫ ॥

ಜನ್ಮ ಜನ್ಮವೂ ದಾಟಿ ಬಂದೆ, ನಿನ್ನ ಕರುಣೆಯಿಂದ ನಿನ್ನ ನೋಡಿದೆ,
ನೀನ್ಯಾರೆಂಬುದು ನಾನರಿಯೇ ನಾನರಿಯೇ, ನಾನೆಂಬುದು ಹೊದೆ ನಿನ್ನನರಿವೆ
ನಿನ್ನ ಹಿರಿಮೆಯು ಎಷ್ಟು ಹೊಗಳಿದರೂ ಹಿಮಾಲಯಾಕ್ಕಿಂತ ಮಿಗಿಲಾಗಿದೆ
ಹೇ ದಯಾಘನಾ, ಆನಂದ ನಂದನ ॥೧॥

॥ ಬಿಡುವೇನೇನಯ್ಯ ॥ ♫ ॥

ನೀಲಕಂಠನು ನೀನೇ, ನೀಲ ಮೇಘ ಶ್ಯಾಮ,
ನಿರಾಧಾರನೇ, ನಿರ್ಗುಣ ರೂಪಾ, ಅಮರ ಜ್ಯೋತಿಯು ನೀನೇ,
ನಿರಂತರನೂ ನೀನೇ, ಸತ್ಯವಂತನು ನೀನೇ,
ಗುರುದತ್ತನೂ ನೀನೇ, ಸದಾನಂದನೂ ನೀನೇ,
ಹೇ ದಯಾಘನಾ ಆನಂದ ನಂದನ ॥೨॥

॥ ಬಿಡುವೇನೇನಯ್ಯ ॥