ಗುರು ಬಂದಾನ
॥ ♫ ॥
ಗುರುಬಂದಾನ ತಂಗಿ ನಮ್ಮೂರಿಗೆ
ಬಾಬಾ ಬಂದಾನ ತಂಗಿ ನಮ್ಮೂರಿಗೆ ॥ಪ॥
॥ ♫ ॥
ಶಿರದಲ್ಲಿ ಪೇಠವ ಧರಿಸ್ಯಾನ ಬೆರಳಲ್ಲಿ ಉಂಗುರ ಇಟ್ಟಾನ
ವಿಭೂತಿ ಗಂಧವ ಹಚ್ಚಾನ ಎಡಗೈಯಲ್ಲಿ ಗಡಿಯಾರ ಧರಿಸ್ಯಾನ ॥೧॥
॥ ಗುರು ॥ ♫ ॥
ರುದ್ರಾಕ್ಷಿ ಜಪಮಣಿ ಧರಿಸ್ಯಾನ ದತ್ತಾತ್ರೇಯ ಮಹಾಮಂತ್ರ ಪಠಿಸ್ಯಾನ
ಆರತಿ ಮಂದಿರದಲ್ಲಿ ಕುಳಿತಾನ ಗುರು ಕೈಲಾಸವೇ ತಾನಾಗ್ಯಾನ ॥೨॥
॥ ಗುರು ॥ ♫ ॥
ಆರತಿಗೆ ಬಾಯೆಂದು ಹೇಳ್ಯಾನ ಭಕ್ತರಿಗೆ ಜ್ಞಾನವ ನೀಡ್ಯಾನ
ಆರತಿಗೆ ಬಾಯೆಂದು ಹೇಳ್ಯಾನ ಭಕ್ತರಿಗೆ ಆಶೀರ್ವಾದ ಮಾಡ್ಯಾನ
ಸಚ್ಚಿದಾನಂದ ಗುರು ಬಂದಾನ ಎಲ್ಲಾ ಭಕ್ತರ ಉದ್ಧಾರ ಮಾಡ್ಯಾನ ॥೩॥
॥ ಗುರು ॥