ಗುರು ಸದಾನಂದರಿಗೆ ವಂದನೆ
॥ ♫ ॥
ಗುರು ಸದಾನಂದರಿಗೆ ವಂದನೆ
ಕರುಣಾನಿಧಿ ನಿಮ್ಮ ಪಾದಕ ವಂದನೆ
ಶರಣ ಜನರ ಪಾಲಕಗೆ ವಂದನೆ
ಅರವಿನ ಮೂರುತಿಗೆ ಅಭಿನಂದನೆ ॥ಪ॥
॥ ಗುರು ॥ ♫ ॥
ದತ್ತಾತ್ರೇಯ ದತ್ತ ಅವತಾರಿಗ ವಂದನೆ
ಚಿತ್ತ ಶುದ್ಧಗೊಳಿಪ ಗುರುದೇವಗ ವಂದನೆ
ನಿತ್ಯವು ಸತ್ಯ ವಾಕ್ಯ ಸಿದ್ಧಿಗ ವಂದನೆ
ಸತ್ಯ ಚಿತ್ತ ಸದಾನಂದ ಮೂರ್ತಿಗ ವಂದನೆ ॥೧॥
॥ ಗುರು ॥ ♫ ॥
ಪರಸನಹಳ್ಳಿ ಪಾವನವು ಭೂಮಿಗ ವಂದನೆ
ಮಲ್ಲಪ್ಪ-ಭೀಮವ್ವ ನಿಮಗೆ ವಂದನೆ
ಶರಣದಂಪತಿ ಚರಣ ಕಮಲಕ ವಂದನೆ
ಹೆತ್ತ ತಾಯಿ-ತಂದೆಗಳಿಗೆ ನಮ್ಮ ವಂದನೆ ॥೨॥
॥ ಗುರು ॥ ♫ ॥
ಬಸವಣ್ಣ-ಹನುಮಂತ ನಿಮಗೆ ವಂದನೆ
ಪರಸನಹಳ್ಳಿ ಗ್ರಾಮ ದೇವರಿಗೆ ವಂದನೆ
ಬಾಲಲೀಲೆ ಆಡಿಯಲ್ಲಿ ಗುರುವು ಬೆಳೆದನೆ
ಸಿಂಧನೂರು ಬಗಳಾಂಬಿಕೆ ದೇವಿಗ ವಂದನೆ ॥೩॥
॥ ಗುರು ॥ ♫ ॥
ಗುರುತಾಯಿ ಗೀರಿಜಮ್ಮ ತಾಯಿಗ ವಂದನೆ
ಪರಮಸತಿ ಪಾರ್ವತಿ ನಿಮಗೆ ವಂದನೆ
ಸದಾನಂದ ಸಹಧರ್ಮಿಣಿ ಸೇವೆ ಪಡೆದನೆ
ಆದಿಶಕ್ತಿ ರೂಪವೇ ನಿಮಗೆ ವಂದನೆ ॥೪॥
॥ ಗುರು ॥ ♫ ॥
ವಿಜಯಪುರ ವಾಸಿ ಶ್ರೀ ಸದಾನಂದನೇ
ಬೆಂಗಳೂರು ಮುಂಬಯಿಯಲಿ ಗುರುವು ಮೆರೆದನೆ
ವಿಷ್ಣು ಬ್ರಹ್ಮ ಮಹೇಶ್ವರನಾಗಿ ಕಂಡನೇ
ಚರಣದೂಳಿ ಕೆಂದೂಳಿಗೂ ಹರಸಿ ನಿಂತನೇ ॥೫॥
॥ ಗುರು ॥