Ondondu kṣētradali

ಒಂದೊಂದು ಕ್ಷೇತ್ರದಲಿ

॥ ♫ ॥

ಒಂದೊಂದು ಕ್ಷೇತ್ರದಲಿ ನೀನು ಮೆರೆಯುತ
ಸದ್ಭಕ್ತರುದ್ದಾರ ನೀನು ಮಾಡುವೆ ॥ಪ॥

॥ ಒಂದೊಂದು ॥ ♫ ॥

ನೀನೊಲಿದಂತಹ ನೆಲವೆಲ್ಲ ಪುಣ್ಯ
ಆ ನೆಲ ಭುವಿಯಲ್ಲಿ ಪುಣ್ಯಕ್ಷೇತ್ರವು

ಮುಂಬಯಿಯಲ್ಲಿ ನಿನ್ನ ಪ್ರಥಮ ಆಶ್ರಮ
ಮಾಡಿದೆ ನೀನು ಭೀಮಾಶಂಕರವನ್ನು ॥೧॥

॥ ಒಂದೊಂದು ॥ ♫ ॥

ಶಿವರಾತ್ರಿಯ ಶುಭದಿನದಿ ನೀನು
ಶಿವನ ರೂಪವ ಸಾಂಬಶಿವ ಸದಾನಂದ

ಬಿಜಾಪುರದಲಿ ನಿನ್ನಯ ವೈಭವ
ದತ್ತ ಜಯಂತಿಯಂದು ಅಲ್ಲಿ ತೋರುವುದು ॥೨॥

॥ ಒಂದೊಂದು ॥ ♫ ॥

ಬೆಂಗಳೂರು ನಗರದಿ ವೈಭವ ತೋರಿದೆ
ಗುರುಪೌರ್ಣಿಮೆಯ ಮಹಿಮೆ ತಿಳಿಸಿದೆ

ರಾಯಾಪುರವನ್ನು ಶ್ರೀಕ್ಷೇತ್ರ ಮಾಡಿದೆ
ನಿಜ ಭಕುತರಿಗೆ ನೀನು ಒಲಿಯುವೆ ॥೩॥

॥ ಒಂದೊಂದು ॥