Sadānanda ninna nōḍalu

ಸದಾನಂದ ನಿನ್ನ ನೋಡಲು

॥ ♫ ॥

ಸದಾನಂದ ನಿನ್ನ ನೋಡಲು ಓಡೋಡಿ ಬಂದೆ ನಾ ಗುರುವೇ
ಹಿಂದೆ ನಾ ಮಾಡಿದ ಪಾಪವ ಕಳೆಯೋ ಮುಂದಿನ ಜನ್ಮವು ಬೇಡವೇ ಬೇಡ ॥ಪ॥

॥ ಸದಾನಂದ ॥ ♫ ॥

ಸಂಸಾರ ಶರಧಿಯೊಳ್ ಬಹುವಿಧದಿ ನೊಂದೆನು
ನೊಂದ ಭಕ್ತರನ್ನೆಲ್ಲ ಸಲಹೋ ಸದಾನಂದ
ಎಂದೆಂದಿಗೂ ನಿನ್ನ ಪಾದವೇ ಗತಿಯೆಂದು
ನಿನ್ನ ನಂಬಿ ಬಂದೆನು ಸದಾನಂದ ॥೧॥

॥ ಸದಾನಂದ ॥ ♫ ॥

ಬಳಲಿ ಬೇಗುದಿಯಾಗಿ ದೇಗುಲಕೆ ಬಂದೆನು
ಬಾಗಿಲೊಳು ಕರಮುಗಿದು ಕಾತರಿಸಿ ನಿಂತೆನು
ಸೋತ ಕರವ ಪಿಡಿದು ಉದ್ಧರಿಸೋ ದೇವಾ
ನಿನ್ನ ನಂಬಿ ಬಂದೆನು ಸದಾನಂದ ಗುರುವೇ ॥೨॥

॥ ಸದಾನಂದ ॥ ♫ ॥

ಕೇಳಲೊಲ್ಲದೇ ಭಕುತರ ಆರ್ತನಾದ ಕೂಗು
ಕೇಳಿದರೂ ಕೇಳದಂತಿರುವೆಯಾ ಹೇಳು
ಶೋಭಿಸದೀಮೌನ ಹೇ ಕೀರ್ತಿಚಂದ್ರ ॥೩॥

॥ಸದಾನಂದ ॥ ♫ ॥

ತ್ರಿಮೂರ್ತಿ ರೂಪ ಗುರುದತ್ತ ನೀ ಕಾಯೋ
ಕರುಣಾ ಮೂರುತಿಯೇ ಸದಾನಂದ ಗುರುವೇ
ನಿನ್ನಂಥ ದೇವರ ನಾನೆಲ್ಲೂ ಕಾಣಲಿಲ್ಲ
ರಾಜಾಧಿರಾಜೇಂದ್ರ ಹೇ ಶ್ರೀ ಮುನೀಂದ್ರ ॥೪॥

॥ ಸದಾನಂದ ॥