Sadanandanige Aarati Belagona ba

ಸದಾನಂದನಿಗೆ ಆರುತಿ ಬೆಳಗೋಣ ಬಾ

॥ ♫ ॥

ಸದಾನಂದ ಶ್ರೀ ಸದ್ಗುರು ವರನಿಗೆ ಆರತಿ ಬೆಳಗುನ ಬಾ
ಚಿದಾನಂದಮಯ ಚಿನ್ಮಯಮೂರ್ತಿಗೆ ಮಂಗಳ ಹಾಡುನ ಬಾ ॥ಪ॥

॥ ♫ ॥

ಸತಿ ಅನಸೂಯೆ ಅತ್ರಿ ಮುನಿಗಳ ಕುವರಗೆ ನಮಿಸುನ ಬಾ
ತ್ರಿಮೂರ್ತಿ ರೂಪಾ ದತ್ತಾತ್ರೇಯಗೆ ಮಂಗಳ ಹಾಡುನ ಬಾ ॥೧॥

॥ ಸದಾನಂದ ॥ ♫ ॥

ಹನುಮಂತರಾಯ ಭೀಮಾಶಂಕರ ರೂಪಿಗೆ ಬೆಳಗುನ ಬಾ
ಸಿದ್ಧಿ ವಿನಾಯಕ ದಿವ್ಯ ದರುಶನ ಇಲ್ಲೇ ಪಡೆಯುನ ಬಾ ॥೨॥

॥ ಸದಾನಂದ ॥ ♫ ॥

ಸೃಷ್ಟಿ ಸ್ಥಿತಿಲಯ ಮೂರಕೆ ಕಾರಣ ಪುರುಷಗೆ ನೆನೆಯುನ ಬಾ
ಬ್ರಹ್ಮ ವಿಷ್ಣು ಮಹೇಶ್ವರ ಶಕ್ತಿಗೆ ಚಿತ್ತದಿ ಬೆಳಗುನ ಬಾ ॥೩॥

॥ ಸದಾನಂದ ॥ ♫ ॥

ಎಲ್ಲ ಧರ್ಮವ ಬಲ್ಲಿದ ಒಡೆಯಗೆ ಎಲ್ಲರೂ ಬೆಳಗುನ ಬಾ
ಎಲ್ಲೆಡೆ ತುಂಬಿದ ಸದಾನಂದಗೆ ಮಂಗಳ ಹಾಡುನ ಬಾ ॥೪॥

॥ ಸದಾನಂದ ॥