ತೇರ ನೋಡವ್ವ ತಂಗಿ
॥ ♫ ॥
ತೇರ ನೋಡವ್ವ ತಂಗಿ ತೇರ ನೋಡ
ತೇರ ನೋಡೋ ತಮ್ಮ ತೇರ ನೋಡೋ
॥ ♫ ॥
ತೇರ ನೋಡೋ ತಮ್ಮ ತೇರ ನೋಡೋ
ಸದಾನಂದ ನವಮಿಯ ತೇರ ನೋಡೋ
ತೇರ ನೋಡವ್ವ ತಂಗಿ ತೇರ ನೋಡ
ಸದಾನಂದ ಮಹಿಮನ ತೇರ ನೋಡ
ತೇರ ನೋಡೋ ತಮ್ಮ ತೇರ ನೋಡೋ
ಸದಾನಂದ ನವಮಿಯ ತೇರ ನೋಡೋ
॥ ♫ ॥
ಮಠದಲಿ ಭಜನೆ ಈಗ ನಡೆದೈತಿ
ನಡೆದೈತಿ ಮಹಾ ಪೂಜೆ ಆರತಿ
ಮಹಾದಾಸೋಹ ಜೋರು ನಡೆದೈತಿ
ಸಾವಿರ ಸಾವಿರ ಮಂದಿ ಸೇರೈತಿ
॥ ತೇರ ನೋಡೋ ॥ ♫ ॥
ಬೆಂಗಳೂರ ಮಂದಿ ಹೂವ ತಂದಾರ
ಹೂವಿಂದ ಗುರುವಿನ ತೇರ ಮಾಡ್ಯಾರ
ಹಾಡಿ ಮದ್ದಾಳೆ ಕಂಸಾಳೆ ನುಡಿಸ್ಯಾರ
ಹಾಡಿ ಕುಣಿಕುಣಿದು ಬಾಬನ ಪಟ ಮೆರೆಸ್ಯಾರ
॥ ತೇರ ನೋಡೋ ॥ ♫ ॥
ಮುತ್ತಿನ ಪಲ್ಲಕಿ ಏರಿ ದತ್ತ ಹೋರಟಾನ
ಭಾಳ ವೈನಾದ ರಂಗೋಲಿ ಹಾಕ್ಯಾರ
ಊರೆಲ್ಲ ತಿರುಗಿ ರಾಯ ತುಂಬಿ ಹರಸ್ಯಾನ
ತುಂಬಿದ ಕೊಡದ ಸೇವೆ ನಿನಗ ಮಾಡ್ಯಾರ
॥ ತೇರ ನೋಡೋ ॥ ♫ ॥
ಉತ್ತತ್ತಿ ಬತ್ತಾಸು ತೇರಮ್ಯಾಲ ಎಸೆದಾರ
ಭಾವ ಭಕ್ತಿಲಿ ಜೈಕಾರ ಮಾಡ್ಯಾರ
ತಕದಮಿ ತಕತಾ ತೈ ಕುಣಿದಾರ
ಭಕ್ತಿಲಿ ತಾವೇ ಮಿಂದು ನಲಿದಾರ
॥ ತೇರ ನೋಡೋ ॥ ♫ ॥
ತೇರು ಪಡುವಣಕ ಹೊಳ್ಳೇತಿ
ಬಾನು ನೆಲ ಕೆಂಧೂಳಿ ಕೆಂಪಾಗೇತಿ
ಆ ಮುಚ್ಚಂಜೆ ಕೆಂಪು ತೇರ ಮುಟೈತಿ
ತೇರ ಮುಂದ ಗುಲಾಲಿಗೆ ರವಿ ನಾಚೈತಿ
॥ ತೇರ ನೋಡೋ ॥ ♫ ॥
ಮುಂಬಯಿಯಿಂದ ಬಾಳ ಮಂದಿ ಬಂದಾರ
ಬಾಳ ಬಿರಸು ಪಟಾಕ್ಷಿ ತಂದಾರ
ತೇರ ಮುಂದ ಸಿಡಿಮದ್ದು ಸಿಡಿಸ್ಯಾರ
ಕಪ್ಪು ಬಾನೆಲ್ಲ ಬಣ್ಣದ ಚುಕ್ಕಿ ಚಿತ್ತಾರ
॥ ತೇರ ನೋಡೋ ॥