ಕರುಣೆಯೇ ಕೈಲಾಸ
॥ ♫ ॥
ಕರುಣೆಯೇ ಕೈಲಾಸ ಒಲುಮೆಯೇ ವೈಕುಂಠ
ದತ್ತಾಲಯ ಮಹಿಮನಾ ಶ್ರೀ ಗುರು ಸದಾನಂದನಾ
ರಾಯಾಪೂರ ಗ್ರಾಮದಿ ಉತ್ತುಂಗ ತಾಣದಿ
ದತ್ತಮಂದಿರದಲ್ಲಿ ನೆಲೆಸಿರುವಾ ಗುರುವಿನಾ ॥೧॥
ಕಾಣುತೆನುತ ಬರುವರು ಭಕುತ ಜನರು ನಿತ್ಯದಿ
ನೆನೆಸಿದೊಡನೆ ಕನಸಿನಲ್ಲಿ ದರುಶನಾ ಗುರುವಿನಾ ॥೨॥
॥ ಕರುಣೆಯೇ ॥ ೨ ಬಾರಿ ॥ ♫ ॥
ಭಜಿಸು ನಿತ್ಯ ದತ್ತನಾ ಸದಾನಂದ ಗುರುವಿನಾ
ನೇಮ ನೀತಿ ನ್ಯಾಯಕೆ ದತ್ತ ಗುರುವು ನೀಡುವಾ ॥೩॥
ನೀನೆಯೆಂದು ನಂಬಿ ಬಂದ ನಿಜ ಭಕ್ತಗೆ ಮೆಚ್ಚುವಾ
ಶಕ್ತಿಯಾಗಿ ನಡೆಸುವಾ ಮುಕ್ತಿಯನ್ನು ನೀಡುವಾ ॥೪॥
॥ ಕರುಣೆಯೇ ॥ ೨ ಬಾರಿ ॥ ♫ ॥
ಸತ್ಯಪ್ರಿಯ ಸತ್ಯಕೆ ಸಾಕ್ಷಾತ್ ಗುರು ರಾಯನಾ
ಕೇಳಿದವಗೆ ಬೇಕಾದುದ ಕೊಟ್ಟ ಸದಾನಂದನಾ ॥೫॥
ನೆನೆಸಿದೊಡನೆ ಮನಸ್ಸಿನಲ್ಲಿ ಕಾಣುವವನು ಪೂಜ್ಯನಾ
ಪಾವನವು ಪುಣ್ಯಭೂಮಿ ಪಡೆದ ಗುರು ಜಂಗಮನಾ ॥೬॥
॥ ಕರುಣೆಯೇ ॥ ೨ ಬಾರಿ ॥ ♫ ॥
ಗುರುರಾಜ ಗುರುವಿನ ಸದಾನಂದ ಗುರುವಿನ
ಗುರುರಾಜ ಗುರುವಿನ ಗುರುದತ್ತ ರಾಜನಾ ॥೨ ಬಾರಿ॥
ಗುರುರಾಜ ಗುರುವಿನ ಹಾಲಬಾವಿ ಗುರುವಿನಾ
ಗುರುರಾಜ ಗುರುವಿನ ಕುದುರೆಸ್ವಾಮಿ ಗುರುವಿನಾ ॥೭॥
॥ ಕರುಣೆಯೇ ॥