ಶಾಂತನಾಗು ಶ್ರೀ ಗುರುದತ್ತ
ಶಾಂತನಾಗು ಶ್ರೀ ಗುರುದತ್ತಾ ಸಂತೈಸಿ ಎನ್ನಯ ಚಿತ್ತಾ ॥ಪ॥
(ಹೇ! ಶ್ರೀ ಗುರು ದತ್ತ ದೇವಾ! ಶಾಂತನಾಗು; ತಳಮಳಗೊಂಡ ನನ್ನ ಚಿತ್ತವನ್ನು ಈಗ ಶಾಂತಗೊಳಿಸು.)
ನೀನೆನ್ನಯ ಮಾತಾಪಿತನು। ಎನ್ನಯ ನಿಜಹಿತ ಚಿಂತಕನು।
ನೀನು ನನ್ನ ಮಾತಾ ಪಿತನು, ನನ್ನ ಹಿತಕ್ಕಾಗಿ ನಿಜವಾಗಿಯೂ ಚಿಂತಿಸುವವನು.
ಬಂಧುವು ಸ್ವಜನಾಪ್ತನು ನೀನು। ನೀನೆನ್ನಯ ಸಂರಕ್ಷಕನು।
ನೀನೇ ನನ್ನ ಬಂಧು-ಬಳಗ-ಆಪ್ತನು, ನನ್ನ ಸಂರಕ್ಷಣೆಯ ಭಾರವನ್ನು ವಹಿಸಿದವನೂ ನೀನೇ
ಭಯಕರ್ತನು ನೀಂ ಭಯಹರ್ತಾ। ದಂಡಧಾರಿ ನೀಂ ಪರಿಪಾತಾ।
ಭಯವನ್ನುಂಟು ಮಾಡುವ ಹಾಗೂ ಭೀತಿಯನ್ನು ತೊಲಗಿಸುವ ಈ ಉಭಯ ಕರ್ತನೂ ನೀನೇ. ಪಾಪ ತಾಪಗಳನ್ನು ನಾಶಗೊಳಿಸುವವನೂ ನೀನೇ, ಕೈಯಲ್ಲಿ ದಂಡವನ್ನು ಹಿಡಿದು ತಪ್ಪುಮಾಡಿದವರನ್ನು ದಂಡಿಸುವವನೂ ನೀನೇ.
ನಿನ್ನನುಳಿದಿಲ್ಲನ್ಯವಾರ್ತಾ ನೀನಾರ್ತರಿಗಾಶ್ರಯದಾತಾ।
ನಿನ್ನನ್ನು ಬಿಟ್ಟು ಅನ್ಯವಸ್ತುವಾಗಲಿ, ಅನ್ಯ ವಿಚಾರವಾಗಲಿ ಯಾವುದೂ ಇಲ್ಲ. ದುಃಖ ತಪ್ತರಾಗಿ ಬಂದ ಜನರಿಗೆ ಆಶ್ರಯವನ್ನು ಕಲ್ಪಿಸುವವನೂ ನೀನೇ.
॥ಸಂತೈಸಿ ಎನ್ನಯ ಚಿತ್ತಾ॥
ಹೇ ದತ್ತ ದೇವಾ ತಳಮಳಗೊಂಡ ನನ್ನ ಚಿತ್ತವನ್ನು ಈಗ ಶಾಂತ ಗೊಳಿಸು.
ಅಪರಾಧಗಳಿಗೆ ಗುರುನಾಥ। ದಂಡವ ಪಿಡಿದಿರುವಿ ಯಥಾರ್ಥ।
ಹೇ! ಗುರುನಾಥಾ! ಅಪರಾಧ ಮಾಡಿದವರನ್ನು ಶಿಕ್ಷಿಸಲು ಕೈಯಲ್ಲಿ ದಂಡವನ್ನು ಹಿಡಿದಿರುವೆ. ಇದು ಯಥಾರ್ಥ.
ಪಾಡಿ ನಿನ್ನ ಮಂಗಳ ಚರಿತಾ। ಚರಣದಿ ಶಿರವಿಡುವೆವು ದತ್ತಾ॥
ಹೇ! ದತ್ತ ಪ್ರಭೋ! ನಿನ್ನ ಮಂಗಳ ಚರಿತೆಯನ್ನು ಹಾಡಿ ಪಾಡಿ ಶಿರವನ್ನು ನಿನ್ನ ಪಾದಪದ್ಮಗಳಲ್ಲಿಟ್ಟು ಶರಣು ಹೋಗುತ್ತಿರುವೆನು.
ಮತ್ತೆಮ್ಮನು ದಂಡಿಸೆ ನೀನು। ನಿನ್ನನುಳಿದನ್ಯ ಜನರನ್ನು।
ಗುರು ದೇವಾ! ನಿನಗೆ ಶರಣು ಬಂದಿರುವೆ, ಕ್ಷಮಿಸಿ ನನ್ನನ್ನು ಕಾಪಾಡು ತಂದೆ. ನಿನ್ನನ್ನು ಬಿಟ್ಟು ಅನ್ಯರಾರನ್ನು
ಬಿಡಿಸಲು ಕರೆಯುವದಾರನ್ನು। ಸಲಹುವರಾರೆಮನ್ನು ದತ್ತಾ।
ಅಡ್ಡಿ ಬಂದು ಬಿಡಿಸೆಂದು ಮೊರೆ ಇಡಲಿ, ಯಾರನ್ನು ಬಂದು ಕಾಪಾಡೆಂದು ಬೇಡಿಕೊಳ್ಳಲಿ. ಹೇ! ಗುರುದತ್ತ ದೇವಾ! ನಿನ್ನ ವಿನಃ ನನ್ನನ್ನು ಸಲಹುವರಾರಿಲ್ಲ.
॥ಸಂತೈಸಿ ಎನ್ನಯ ಚಿತ್ತಾ॥
ತಳಮಳಗೊಂಡ ನನ್ನ ಚಿತ್ತವನ್ನು ಈಗ ಸಂತಸಗೊಳಿಸು.
ತಾಳುತೆ ಕೋಪಿಯ ವೇಷವನು। ದಂಡಿಸೆ ಪಾಪಿಗಳಾವುದನು।
ಮರೆತು ಮತ್ತೆ ಅಪರಾಧವನು। ಗೈಯಲು ಕ್ಷಮಿಸುವದೆಮ್ಮನ್ನು।
'ಗಚ್ಛತಃ ಸ್ಖಲನಂ ಕ್ವಾಪಿ'। ಎಂಬುದನೊಪ್ಪಿ ನೀಂ ಕೋಪಿ।
ಯಾಗದೇ ಕೃಪೆಮಾಡು ಪ್ರತಾಪಿ। ಪರಿಪಾಲಿಪುದೈ ಭಗವಂತಾ॥
ಹೇ! ದತ್ತ ಗುರುವೇ! ನೀನು ಗೈದ ಹಿತ ಬೋಧೆಯನ್ನು ಪರಿಪಾಲಿಸದೆ, ಅಜ್ಞಾನದಿಂದ ಮತ್ತೆ ಮತ್ತೆ ಗೈದ ತಪ್ಪುಗಳಿಗಾಗಿ ಕೋಪವನ್ನು ತಾಳದೆ ಕೃಪೆತೋರಿ ನನ್ನನ್ನು ಕ್ಷಮಿಸು, ರಕ್ಷಿಸು.
॥ಸಂತೈಸಿ ಎನ್ನಯ ಚಿತ್ತಾ॥
ಹೇ! ಭಗವಂತಾ! ತಳಮಳಗೊಂಡ ನನ್ನ ಚಿತ್ತವನ್ನು ಕೃಪೆತೋರಿ ಈಗ ಶಾಂತಗೊಳಿಸು.
ತಾತ ನಿನ್ನ ಪದರಿನೊಳಿರಲು। ದಾರಿಯನು ಬಿಡಲು ಕಾಲುಗಳು।
ಹೇ ದತ್ತ ದೇವಾ! ಅಜ್ಜಾ ! ನಿನ್ನ ಸೇವೆ ಮಾಡುತ್ತಾ ನಿನ್ನ ಆಶ್ರಯದಲ್ಲಿದ್ದ ನಾನು ಅಜ್ಞಾನದಿಂದ ಆದಾವ ಕಾರಣದಿಂದಲೋ ನಿನ್ನನ್ನು ಆಗಲಿ ದೂರ ಹೊರಟು ಹೋಗುವ ಸಮಯದಲ್ಲಿ
ಸಹನದಿಂತಿದ್ದಿ ದಾರಿಯೊಳು। ತರುವರಾರಿಲ್ಲ ಅನ್ಯರೊಳು।
ನನ್ನನ್ನು ಹಿಂಬಾಲಿಸಿ ಬಂದು, ನಿಲ್ಲಿಸಿ, ಸಹನೆವಹಿಸಿ ಬುದ್ಧಿವಾದವನ್ನು ಹೇಳಿ ಹಿಂದಕ್ಕೆ ಕರೆತರುವವರು ಈ ಜಗದಲ್ಲಿ ನಿನ್ನನ್ನು ಬಿಟ್ಟು ಅನ್ಯರಾರೂ ಇಲ್ಲ.
ನಿಜ ಬಿರುದನು ಮನದೊಳು ತಂದು। ಪತಿತಪಾವನ ನೀನಿಂದು।
ಪತಿತ ಪಾವನನೆಂಬ ಬಿರುದುಳ್ಳ ಹೇ! ದತ್ತದೇವಾ! ನೀನು ದಯೆತೋರಿ ಕಾಪಾಡು.
ದತ್ತಾ ನೋಡೆಮ್ಮನು ಬಂದು। ಕರುಣಾಘನ ನೀಂ ಗುರುನಾಥಾ॥
ಕರುಣಾಘನನಾದ ಹೇ! ಗುರುನಾಥಾ!
॥ಸಂತೈಸಿ ಎನ್ನಯ ಚಿತ್ತಾ॥
ತಳಮಳಗೊಂಡ ನನ್ನ ಚಿತ್ತವನ್ನು ಈಗ ದಯೆತೋರಿ ಶಾಂತಗೊಳಿಸು.
ಸಹಕುಟುಂಬ ಸಹಪರಿವಾರ। ದಾಸರು ನಾವೀಗ ಮನೆಮಾರ।
ಹೇ ಗುರುನಾಥಾ| ನಾನು, ನನ್ನ ಕುಟುಂಬ ಸಪರಿವಾರ ಸಮೇತ ನಿನ್ನ ದಾಸರಾಗಿರುವೆವು.
ನಿನ್ನಡಿಗರ್ಪಿಸುವ್ಯವಹಾರ। ಸಂಸಾರದ ದುಃಖದ ಭಾರ।
ನನ್ನ ಸಂಸಾರದ ದುಃಖದ ಭಾರವನ್ನು ಮತ್ತು ವ್ಯವಹಾರಗಳನ್ನೆಲ್ಲಾ ನಿನ್ನಲ್ಲಿ ವಿವರವಾಗಿ ತಿಳಿಸುತ್ತಾ ನಿಮ್ಮ ಅಡಿಗಳ ಮೇಲೆ ಬಿದ್ದು ರಕ್ಷಿಸೆಂದು ಶರಣು ಬೇಡುತ್ತಿರುವೆನು.
ಪರಿಹರಿಸೈ ಕರುಣಾಸಿಂಧೂ। ನೀ ದೀನಾನಾಥರ ಬಂಧು।
ಸಂಸಾರಸಾಗರದಲ್ಲಿ ಮುಳುಗಿ ದುಃಖತಪ್ತರಾದ ನಮ್ಮನ್ನು ಕರುಣಾಸಿಂಧೂ ದೀನಾನಾಥರ ಬಂಧೂ ಆದ ಹೇ! ಗುರುದತ್ತ ದೇವನೇ! ಕೃಪೆ ತೋರಿ ದಡವನ್ನು ಸೇರಿಸು, ರಕ್ಷಿಸು.
ತಟ್ಟದಿರಲೆಮಗೆ ಅಘಬಿಂದು। ವಾಸುದೇವ ಪ್ರಾರ್ಥಿತ ದತ್ತಾ
ದಾಸಯೋಗೀಶನಂತಸ್ಥಾ। ಶಾಂತನಾಗು ಶ್ರೀ ಗುರುದತ್ತಾ।
(ವಿರಚಿತ: ಶ್ರೀ ವಾಸುದೇವಾನಂದ ಸರಸ್ವತಿ (ಶ್ರೀ ಟೆಂಬೆಸ್ವಾಮಿ))
॥ಸಂತೈಸಿ ಎನ್ನಯ ಚಿತ್ತಾ॥
ತಳಮಳಗೊಂಡ ನನ್ನ ಚಿತ್ತವನ್ನು ಈಗ ದಯೆತೋರಿ ಶಾಂತಗೊಳಿಸು.
Śāntanāgu śrī gurudattā santaisi ennaya chittā॥pa॥
nīnennaya mātāpitanu। ennaya nijahita cintakanu।
bandhuvu svajanāptanu nīnu। nīnennaya sanrakṣakanu।
bhayakartanu nīṁ bhayahartā। daṇḍadhāri nīṁ paripātā।
ninnanuḷidillan'yavārtā nīnārtarigāśrayadātā।
॥santaisi ennaya chittā॥
aparādhagaḷige gurunātha। daṇḍava piḍidiruvi yathārtha।
pāḍi ninna maṅgaḷa caritā। caraṇadi śiraviḍuvevu dattā॥
mattem'manu daṇḍise nīnu। ninnanuḷidan'ya janarannu।
biḍisalu kareyuvadārannu। salahuvarāremannu dattā।
॥santaisi ennaya chittā॥
tāḷute kōpiya vēṣavanu। daṇḍise pāpigaḷāvudanu।
maretu matte aparādhavanu। gaiyalu kṣamisuvadem'mannu।
'gacchataḥ skhalanaṁ kvāpi'। embudanoppi nīṁ kōpi।
yāgadē kr̥pemāḍu pratāpi। paripālipudai bhagavantā॥
॥santaisi ennaya chittā॥
tāta ninna padarinoḷiralu। dāriyanu biḍalu kālugaḷu।
sahanadintiddi dāriyoḷu। taruvarārilla an'yaroḷu।
nija birudanu manadoḷu tandu। patitapāvana nīnindu।
dattā nōḍem'manu bandu। karuṇāghana nīṁ gurunāthā॥
॥santaisi ennaya chittā॥
sahakuṭumba sahaparivāra। dāsaru nāvīga manemāra।
ninnaḍigarpisuvyavahāra। sansārada duḥkhada bhāra।
pariharisai karuṇāsindhū। nī dīnānāthara bandhu।
taṭṭadiralemage aghabindu। vāsudēva prārthita dattā
dāsayōgīśanantasthā। śāntanāgu śrī gurudattā।
॥santaisi ennaya chittā॥
Have a better recording? Please reach out to us on the provided email id.