Trikala gyani Sri Sri Sri Sadguru Sadanada Maharajaru yavagalu bhaktara chinteyalli irrutare
ನಾನು ನಮಗಾದಂಥ ಮತ್ತೊಂದು ಪವಾಡ ವನ್ನು ಸದ್ಭಕ್ತ ರಲ್ಲಿ ಹಂಚಿ ಕೊಳ್ಳಲು ಇಚ್ಚಿಸುತ್ತೇನೆ.
ಈ ಘಟನೆ ನನಗೂ ಮತ್ತು ನನ್ನ ಧರ್ಮಪತ್ನಿ ಶ್ರೀಮತಿ ಗಿರಿಜಾ ತಾಯಿಗೂ 1980ರ ದಶಕ ದಲ್ಲಿ ಅನುಭವ ಕ್ಕೆ ಬಂದಂಥದ್ದು.
ನಾವೆಲ್ಲ ಭಕ್ತರು ನಮ್ಮ ಪೂರ್ವಾರ್ಜಿತ ಪುಣ್ಯದ ಕರ್ಮದ ಫಲದ ಸುದೈವದಿಂದ ಶ್ರೀಗುರು, ಪರಮ ಗುರು, ದತ್ತಾವತಾರಿ ಶ್ರೀ ಶ್ರೀ ಶ್ರೀ ಸದಾನಂದ ಮಹಾರಾಜರ ಭಕ್ತ ರಾಗುವ ಸುಯೋಗ ದೊರೆತಿದೆ.
ಶ್ರೀ ಬಾಬಾ ಅವರು ತಮ್ಮ ದಿವ್ಯ ಶಕ್ತಿ ಯಿಂದ ಯಾವಾಗಲೂ ಎಲ್ಲ ಕಡೆಗೂ ವ್ಯಾಪಿಸಿದ್ದಾರೆ.
ಎಲ್ಲ ಭಕ್ತರ ಬೆಂಗಾವಲಾಗಿ ಎಲ್ಲರ ಜೊತೆ ಯಲ್ಲಿಯೇ ಇದ್ದಾರೆ.
ಅವರನ್ನು ಯಾರು ಮನಃ ಪೂರ್ವಕವಾಗಿ ಸ್ಮರಿಸುತ್ತಾರೋ ಶ್ರದ್ಧಾ ಭಕ್ತಿ ಯಿಂದ ಅವರ “ಬೀಜ ಮಂತ್ರ “ವನ್ನು ಪಠಿಸುತ್ತಾರೋ ಅಂಥ ನಿರ್ಮಲ ಭಕ್ತಿ ಗೆ ಶ್ರೀ ಸದಾನಂದ ಬಾಬಾ ಅವರು ಬೇಗನೆ ಒಲಿಯುತ್ತಾರೆ. ಭಕ್ತರು ಬಯಸಿದ್ದು ಬೇಗನೆ ದೊರೆಯುವದರಲ್ಲಿ ಸಂದೇಹವೇ ಇಲ್ಲ.
ಅವರ ಪ್ರೇರಣೆ ಯಿಂದಲೇ ಈ ಒಂದು ಪವಾಡ ವನ್ನು ಬರೆದು ಭಕ್ತರ ಮುಂದೆ ಇಡುತ್ತಿದ್ದೇನೆ.
ಸುಮಾರು 80 ನೇ ಧಶಕದ ಒಂದು ದಿನ ಮದ್ಯಾಹ್ನ 2/2-30ರ ಸಮಯ ಸಾಯಿನ್ ನಲ್ಲಿರೊ ನಮ್ಮ ಮನೆಯ ಕರೆ ಗಂಟೆ ಬಾರಿಸಿತು. ನನ್ನ ಪತ್ನಿ ಬಾಗಿಲು ತೆರೆದು ನೋಡಿದಾಗ ಶ್ರೀ ಬಾಬಾ ಅವರ ಡ್ರೈವರ ಬಾಗಿಲಲ್ಲಿ ನಿಂತಿದ್ದಾ. ಆ ದಿನ ದೈನಂದಿನ ನಡೆಯುವ ಬೆಳಗಿನ ಭಜನೆ ಆರತಿ ಕಾರ್ಯಕ್ರಮಕ್ಕೆ ಆಕೆ ಹೋಗಿರಲಿಲ್ಲ.
ನೀವು ಬೇಗನೆ ಆಶ್ರಮ ಕ್ಕೆ ಬರಬೇಕಂತೆ ಬಾಬಾ ಅವರು ಹೇಳಿದರು. ಎಂದು ಹೇಳಿದ.
ನೀನು ಹೋಗು., ನಾನು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಕಾರಿನಲ್ಲಿ ಬರುತ್ತೇನೆ ಎಂದು ತಾಯಿ ಹೇಳಿದರು. ಅದಕ್ಕೆ ಇಲ್ಲ ನೀವು ಬಾಬಾ ಅವರ ಕಾರಲ್ಲಿಯೇಬರಬೇಕು ಎಂದು ಹೇಳಿದ. ಕಾರಣ ಆಕೆ ಬೇರೆ ಸೀರೆ ಉಟ್ಟು ಆಶ್ರಮಕ್ಕೆ ಬಂದಳು..
ಬಾಬಾ ಅವರಿಗೆ ನಮಸ್ಕರಿಸಿದ ನಂತರ… ಆಕೆಗೆ ಬಾಬಾ ಅವರು ಕೆಲವು ಶಬ್ದಗಳಲ್ಲಿ ಹೇಳಿದ್ದೇನೆಂದರೆ.. “ಗಂಡಾ, ಫ್ಯಾಕ್ಟರಿ, ಡಾಕ್ಟರ್, ಬರಕ್ಕೆ ಹೇಳು, ಟೆಲಿಫೋನ್ ಹಚ್ಚು”(ನಿನ್ನ ಗಂಡನ ಫ್ಯಾಕ್ಟರಿ ಯಲ್ಲಿ ಇರುವ ಡಾಕ್ಟರ್ ರಿಗೆ ಫೋನು ಮಾಡಿ ಬೇಗನೆ ಆಶ್ರಮಕ್ಕೆ ಬರಲು ಹೇಳು. )
ಶ್ರೀ ಬಾಬಾ ಅವರು ಹೇಳಿದ್ದು ಆಕೆಗೆ ಅರ್ಥ ವಾಯಿತು. ಬಾಬಾ ಡಾ||.ಎಂ. ಎ. ಚಿಟ್ನಿಸ? .. ಶ್ರೀ ಬಾಬಾ ಅವರು ಹೌದೆನ್ನುವಂತೆ ಕಣ್ಣಲ್ಲೇ ಹೇಳಿದರು.
ಆದರೆ ಫ್ಯಾಕ್ಟರಿಯ ಟೆಲಿಪೋನ ನಂಬರ ಮನೆಯಲ್ಲಿ ಪುಸ್ತಕ ದಲ್ಲಿ ಬರೆದಿತ್ತು. ಆಕೆಗೆ ಅದು ನೆನಪಿರಲಿಲ್ಲ. ಆಕೆ ಶ್ರೀ ಬಾಬಾ ಅವರನ್ನೇ ತದೇಕ ಚಿತ್ತದಿಂದ ನೋಡುತಿದ್ದಳು, ಶ್ರೀ ಬಾಬಾ ಅವರು ಸಹ ಆಕೆಯನ್ನೇ ನೋಡುತಿದ್ದರು, ತಕ್ಷಣ ಆಕೆಗೆ ಫೋನ ನಂಬರ ನೆನಪಾಗಿ, ಡಾ ||.ಎಂ. ಎ. ಚಿಟ್ನಿಸ ಅವರಿಗೆ, ಆದಷ್ಟು ಬೇಗ ಆಶ್ರಮಕ್ಕೆ ಬನ್ನಿ ಶ್ರೀ ಬಾಬಾ ಅವರು ನಿಮ್ಮನ್ನು ನೋಡಬೇಕಂತ. ನಾನು ಕೂಡ ಇಲ್ಲಿಯೇ ಇರುವೆನು. ಎಂದು ಹೇಳಿದಳು.
ಅವರು ಮುಖ್ಯ ಆರೋಗ್ಯಾಧಿಕಾರಿ ಗಳಾದ್ದರಿಂದ ಅವರು ತಮ್ಮ ಸಿಬ್ಬಂದಿ ಗಳಿಗೆಲ್ಲ, ನಾನು ಒಂದು ಗಂಟೆಹೊತ್ತು ಹೊರಗಡೆ ಹೋಗಿ ಬರುತ್ತೇನೆ ಎಂದು ಸೂಚಿಸಿ, ಆಶ್ರಮಕ್ಕೆ ಬಂದರು. ಡಾ|| ಚಿಟ್ನಿಸ ಅವರು ಯಾವಾಗಲು ಭಜನೆ, ಆರತಿಗಳಲ್ಲಿ ಪಾಲುಗೊಳ್ಳುತ್ತಿರಲಿಲ್ಲ. ಆದರೆ ಶ್ರೀ ಬಾಬಾ ಅವರ ಬಗ್ಗೆ ಅವರಿಗೆ ಗೊತ್ತಿತ್ತು. ಕೆಲವೊಂದು ಸಂಧರ್ಭಗಳಲ್ಲಿ ಬಾಬಾ ಅವರ ದರ್ಶನ ಪಡೆದಿದ್ದರು.
ಆಶ್ರಮಕ್ಕೆ ಬಂದು ಬಾಬಾ ಅವರ ಪಾದಕ್ಕೆ ನಮಸ್ಕರಿಸಿದ ನಂತರ ಬಾಬಾ ಅವರು ಸೂಚಿಸಿದ ಸ್ಥಳ ದಲ್ಲಿ ಡಾ||.ಮತ್ತು ನನ್ನ ಪತ್ನಿ ಕುಳಿತು ಕೊಂಡರು.
ಸುಮಾರು ಒಂದು ಗಂಟೆ ಕಳೆಯುತ್ತಾ ಬಂತು. ಶ್ರೀ ಬಾಬಾ ಅವರು ಏನನ್ನು ಮಾತಾಡಲಿಲ್ಲ.
ಬಾಬಾ ಅವರು ಯಾಕೆ ನನ್ನನ್ನು ಕರೆದು ಸುಮ್ಮನೆ ಇಷ್ಟು ಹೊತ್ತು ಕೂಡಿಸಿದರು ಎಂದು ಯೋಚಿಸುತ್ತಿರುವಾಗ ಒಂದು ಗಂಟೆ ಮುಗಿಯುತ್ತಾ ಬಂದಿತ್ತು, ತಕ್ಷಣ ಬಾಬಾ ಅವರು ನೀನು ಫ್ಯಾಕ್ಟರಿಗೆ ವಾಪಸ್ಸು ಹೋಗು ಎಂದರು. ನನ್ನ ಹೆಂಡತಿಯು ಸೇರಿದಂತೆ ಅಲ್ಲಿದ್ದ ಕೆಲವು ಭಕ್ತರ ಮನಸ್ಸಲ್ಲಿ, ಏನನ್ನು ಹೇಳದೆ ಯಾವ ಕಾರಣ ವನ್ನೂ ಹೇಳದೆ, ಶ್ರೀ ಬಾಬಾ ಅವರು ಡಾ|| ರನ್ನು ಫ್ಯಾಕ್ಟರಿಗೆ ವಾಪಸ್ಸು ಕಲಿಸಿದ್ದೇಕೆ? ಎನ್ನುವ ಪ್ರಶ್ನೆ ಕಾಡತೊಡಗಿತು.
ಹೊರಗೆ ಬಂದ ನನ್ನ ಪತ್ನಿ ಒಬ್ಬರಿಗೊಬ್ಬರು ಮಾತಾಡಿ ಕೊಂಡು, ಹೊರಟರು.
ಡಾ||.ಚಿಟ್ನಿಸ ತಮ್ಮ ಕೊಠಡಿಗೆ ವಾಪಸ್ಸು ಬಂದಾಗ, ಅಲ್ಲಿ ಅನೇಕ ಜನ ಸಿಬ್ಬಂದಿ ವರ್ಗದವರು. ರಕ್ಷಣಾದಳದವರು, ಅಗ್ನಿಶಾಮಕದಳದವರು, ಮತ್ತು ಅಧಿಕಾರಿ ಗಳು ಅಲ್ಲಿದ್ದರು.
ಆ ವಿಭಾಗದ ಕಟ್ಟಡ ದ ವಿಂಗಡಣೆ ವಿಸ್ತಾರದ ಕೆಲಸವು ನಡೆದಿತ್ತು. ಅಲ್ಲಿ ಕಟ್ಟಡದ ಮೇಲ್ಚಾವಣಿ ಇದ್ದಕಿದ್ದಂತೆ ಕುಸಿದು, ಡಾ||.ಚಿಟ್ನಿಸ ಕುಳಿತುಕೊಳ್ಳುವ ಜಾಗದಲ್ಲಿಯೇ ಬಿದ್ದಿತು.
ಡಾ|| ಕೂಡುವ ಕುರ್ಚಿ ಟೇಬಲ ಎಲ್ಲ ಭಯಂಕರ ವಾಗಿ ಜಜ್ಜಿ ಹೋಗಿದ್ದವು.
ಎಲ್ಲರು ಡಾ||.ಎಲ್ಲಿಹೋದರು ಅವರಿಗೇನಾಯಿತು? ಎಂದು ಗಾಬರಿಯಿಂದ ಹುಡುಕುತ್ತಿರುವಾಗ, ಡಾ||.ಮರಳಿ ಬಂದರು.
ಆಗ ನಮ್ಮ ಪರಮ ಗುರು ಶ್ರೀ ಶ್ರೀ ಶ್ರೀ ಸದಾನಂದ ಮಹಾರಾಜರ ಅದಮ್ಯ ಅಗಾಧ ಶಕ್ತಿಯ ಅರಿವು ಡಾ.|| ರರಿಗೆ ಆಯಿತು.
ನಾನು ಮನೆಗೆ ಹಿಂದಿರುಗಿ ಬಂದಾಗ ನನ್ನ ಪತ್ನಿ, ಡಾ|| ಆಶ್ರಮಕ್ಕೆ ಬಂದ ಬಗ್ಗೆ ಹೇಳಿದಳು.
ನಾನು ಆಕೆ ಗೆ ನಿಜವಾದ ಕಾರಣ ವನ್ನು ವಿವರಿಸಿಹೇಳಿದೆ.
ತ್ರಿಕಾಲ ಜ್ಞಾನಿ, ಭಕ್ತ ರಕ್ಷಕ, ದುರಿತದೂರ, ನಮ್ಮ ಬಾಬಾ, ಸಾಂಧರ್ಭಿಕವಾಗಿ ಬಂದು ಹೋಗುತಿದ್ದ, ಅಪರಿಚಿತ ಭಕ್ತನನ್ನು ಹೇಗೆ ಕಾಪಾಡಿದರು ಎಂದು.
ಭಕ್ತ ಮಹಾಶಯರೇ ದಯವಿಟ್ಟು ಯಾವಾಗಲೂ ಶ್ರೀ ಬಾಬಾ ಅವರನ್ನು ನಂಬಿರಿ. ನೆನಿಯಿರಿ. ಮತ್ತುಅದ್ಭುತ ಶಕ್ತಿಯುತ “ಬೀಜ ಮಂತ್ರ “ವನ್ನು ಮರೆಯದೆ ಜಪಿಸಿ.
🙏🙏ಜೈ ಶ್ರೀ ಸದಾನಂದ ಮಹಾರಾಜ 🙏🙏
ಜಿ. ಎನ್. ಎಸ್. ರಾವು.
Jai Sadanand Baba Jai gurudev Datta trikal dnyni 💐💐🙏🏼🙏🏼
ಭಕ್ತಪ್ರೇಮಿ ಶ್ರೀ ಸದ್ಗುರು ಸದಾನಂದ ಮಹಾರಾಜ್ ಕೀ ಜೈ…
ಜೈ ಶ್ರೀ ಸದ್ಗುರು ಸದಾನಂದ ಮಹಾರಾಜ ಕೀ ಜೈ 🙏🙏
ದತ್ತ ದಿಗಂಬರ ಮಹಾರಾಜ ಕೀ ಜೈ 🙏🙏
ಸಾಧು ಸಂತನ ಕೀ ಜೈ 🙏🙏
ಜೈ ದತ್ತ ದೇವ ಜೈ ಸದಾನಂದ ಬಾಬಾ 🙏🙏🌼🌼🌹🌹💐💐🌹🌹🙏🙏🙏
Dattatreya om namah shivaaya shri sadanandaya namah, kaapaadi baba nanna appa,
baba baba baba baba baba baba baba baba baba 🙏🙏🙏🙏🙏🙏🙏🙏🙏